Tuesday, 10 October 2017

ಭಾರತದಲ್ಲಿಂದು ಪೂರ್ಣ ಡಿಸ್‌ಪ್ಲೇ ಫೋನ್ 'ಶಿಯೋಮಿ ಮೈ ಮಿಕ್ಸ್ 2' ಬಿಡುಗಡೆ!!

October 10, 2017

ಭಾರತದಲ್ಲಿಂದು ಪೂರ್ಣ ಡಿಸ್‌ಪ್ಲೇ ಫೋನ್ 'ಶಿಯೋಮಿ ಮೈ ಮಿಕ್ಸ್ 2' ಬಿಡುಗಡೆ!!


ಶಿಯೋಮಿ ಕಂಪೆನಿ ಮೊದಲ ಬೆಜೆಲ್ ಲೆಸ್‌ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ 'ಶಿಯೋಮಿ ಮೈ ಮಿಕ್ಸ್ 2' ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ.!! ನವದೆಹಲಿಯಲ್ಲಿ ಆಯೋಜನೆಯಾಗಿರುವ ಕಾರ್ಯಕ್ರಮದಲ್ಲಿ ಶಿಯೋಮಿ ಮೈ ಮಿಕ್ಸ್ 2 ಫೋನ್ ಬಿಡುಗಡೆಯಾಗುತ್ತಿದ್ದು, ಭಾರತದಲ್ಲಿ ಫೋನ್ ಬೆಲೆ ನಿಗದಿ ಬಗ್ಗೆ ಕುತೋಹಲ ಏರ್ಪಟ್ಟಿದೆ.!!

ಕಡಿಮೆ ಬಜೆಟ್‌ ಬೆಲೆಯಲ್ಲಿ ಶಿಯೋಮಿ ಸ್ಮಾರ್ಟ್‌ಪೋನ್‌ಗಳನ್ನು ಹೊರತರುತ್ತಿರುವುದರಿಂದ 'ಶಿಯೋಮಿ ಮೈ ಮಿಕ್ಸ್ 2' ಸ್ಮಾರ್ಟ್‌ಫೋನ್ ಬೆಲೆಯೂ ಸಹ ಬಾರತದಲ್ಲಿ ಇಳಿಕೆಯಾಗಲಿದೆ ಎಂದು ತಂತ್ರಜ್ಞರು ಅಭಿಪ್ರಾಯಪಟ್ಟಿದ್ದು, ಭಾರತೀಯರಿಗೆ ಮೊದಲ ಬಾರಿಗೆ ಪೂರ್ಣ ಡಿಸ್‌ಪ್ಲೇ ಹೊಂದಿರುವ ಫೋನ್ ಕಡಿಮೆ ಬೆಲೆಗೆ ಸಿಗಲಿದೆ ಎನ್ನಬಹುದು.!!

'ಶಿಯೋಮಿ ಮೈ ಮಿಕ್ಸ್ 2' ಫೋನ್ 18:9ರ ಅನುಪಾತವನ್ನು ಡಿಸ್‌ಪ್ಲೇ ಹೊಂದಿದ್ದು, 95% ನಷ್ಟು ಸ್ಕ್ರೀನ್ ಮೊಬೈಲ್‌ನಲ್ಲಿ ಲಭ್ಯವಿದೆ.! ಫ್ಲಿಪ್‌ಕಾರ್ಟ್‌ನಲ್ಲಿ ಮೊದಲು ಫ್ಲಾಶ್‌ಸೇಲ್ ಆರಂಭವಾಗಲಿದ್ದು, ಹಾಗಾದರೆ, ಮೈ ಮಿಕ್ಸ್ 2 ಫೋನ್ ಬೇರೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ? ಮತ್ತು ಬೆಲೆ ಎಷ್ಟಿರಬಹುದು?ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್!


'ಶಿಯೋಮಿ ಮೈ ಮಿಕ್ಸ್ 2' 5.99 ಇಂಚ್ ಗಾತ್ರದ ಅತ್ಯದ್ಬುತ AMOLED 2K ಪೂರ್ಣ ಸ್ಕ್ರೀನ್ ಡಿಸ್‌ಪ್ಲೇ ಹೊಂದಿದ್ದು, ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ಆಗುವಹಾಗೆ ರೂಪಿಸಲಾಗಿದೆ.! ಇನ್ನು ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 835 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 7.1.1 ನ್ಯೂಗಾದಲ್ಲಿ ಸ್ಮಾರ್ಟ್‌ಫೋನ್ ರನ್ ಆಗಲಿದೆ.!!

RAM ಮತ್ತು ROM ಎಷ್ಟು?


6GB RAM ಮತ್ತು 128GB ಮೆಮೊರಿ ಮತ್ತು 8GB RAM ಮತ್ತು 256GB ಮೆಮೊರಿ ಎರಡು ವೆರಿಯಂಟ್‌ಗಳಲ್ಲಿ 'ಶಿಯೋಮಿ ಮೈ ಮಿಕ್ಸ್ 2' ಫೋನ್ ಬಿಡುಗಡೆಯಾಗಲಿದೆ !! ಆಂತರಿಕ ಮೆಮೊರಿಯನ್ನು ಮೈಕ್ರೊ SD ಕಾರ್ಡ್‌ ಮೂಲಕ ವಿಸ್ತರಿಸಬಹುದು ಆಯ್ಕೆಯೂ ಇರಲಿದೆ.!!

ಡ್ಯುಯಲ್ ಕ್ಯಾಮೆರಾ!


'ಶಿಯೋಮಿ ಮೈ ಮಿಕ್ಸ್ 2' ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, 12-ಮೆಗಾಪಿಕ್ಸೆಲ್‌ನ ಎರಡು ರಿಯರ್ ಕ್ಯಾಮೆರಾ ಹಾಗೂ 2 ಮೈಕ್ರಾನ್ ಪಿಕ್ಸೆಲ್ ಇರುವ ಒಂದು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ನಲ್ಲಿದೆ.!!
ಬ್ಯಾಟರಿ ಶಕ್ತಿ ಕಡಿಮೆ ಇರಲಿದೆ.

ಮಲ್ಟಿಮೀಡಿಯಾಗೆ ರೂಪಿತವಾಗಿರುವ ಮೈ ಮಿಕ್ಸ್ 2 ಸ್ಮಾರ್ಟ್‌ಫೊನ್ 3,400mAh ಬ್ಯಾಟರಿ ಹೊಂದಿದೆ.! ಆದರೆ, ಈಗಾಗಲೇ 5000mAh ಬ್ಯಾಟರಿ ಶಕ್ತಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಶಿಯೋಮಿ ಈ ಫೋನಿನಲ್ಲಿ ಕಡಿಮೆ ಬ್ಯಾಟರಿ ಶಕ್ತಿ ನೀಡಿದೆ.!!

ಇತರ ಫೀಚರ್ಸ್ ಮತ್ತು ಬೆಲೆ ಎಷ್ಟು?


4G ವೋಲ್ಟ್, ಡ್ಯುಯಲ್ ಬ್ಯಾಂಡ್, (2.4GHz and 5GHz) ಬ್ಲೂಟೋತ್ v5.0, USB ಟೈಪ್ ಸಿ, ಇನ್‌ಫ್ರಾರೆಡ್ ಸೆನ್ಸಾರ್ ಹಾಗೂ ಲೈಟ್‌ನಿಂಗ್ ಫಾಸ್ಟ್ ಫಿಂಗರ್‌ಪ್ರಿಂಟ್ ನಂತಹ ಎಲ್ಲಾ ಅತ್ಯಾಧುನಿಕ ಫೀಚರ್ಸ್ ಮೈ ಮಿಕ್ಸ್ 2 ನಲ್ಲಿ ಅಡಕವಾಗಿವೆ.!! ಈಗಾಗಲೇ ಹೊರಬಿದ್ದಿರುವ ಮಾಹಿತಿ ಪ್ರಕಾರ 6GB RAM/ 64GB ಫೋನ್ ವೆರಿಯಂಟ್ ಫೋನ್ ಬೆಲೆ ರೂ. 32,300 ಆಗಿದ್ದರೆ, 6GB RAM/ 128GB ವೆರಿಯಂಟ್ ಫೋನ್ ಬೆಲೆ 35,300 ಆಗಿರಲಿದೆ ಅಥವಾ ಬೆಲೆ ಕಡಿಮೆಯಾಗುವ ಸಂಭವ ಕೂಡ ಹೆಚ್ಚಿದೆ.!!


ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://youtu.be/Ft0izZJZxb8


ಧನ್ಯವಾದಗಳು.

Written by

We are Creative Blogger Theme Wavers which provides user friendly, effective and easy to use themes. Each support has free and providing HD support screen casting.

0 comments:

Recent posts

# STETHOSCOPE ಪ್ಯಾರಿಸ್ನ ನೆಕರ್-ಎನ್ಫಾಂಟ್ಸ್ ಮ್ಯಾಲೇಡ್ಸ್ ಆಸ್ಪತ್ರೆಯಲ್ಲಿ 1816 ರಲ್ಲಿ ರೆನೆ ಲಾನೆಕ್ ಅವರು ಸ್ಟೆತೊಸ್ಕೋಪ್ ಅನ್ನು ಫ್ರಾನ್ಸ್ನಲ್ಲಿ ಕಂಡುಹಿಡಿದರ...

 

© 2013 ವಿಶೇಷವಾಣಿ. All rights resevered. Designed by Templateism | Blogger Templates

Back To Top