Tuesday, 10 October 2017

ಹುಷಾರ್! ಫೋನ್ ನಲ್ಲಿ ಗೇಮ್ ಆಡಿದರೆ ಹೀಗೂ ಆಗುತ್ತೆ....

October 10, 2017

ಚಿತ್ರ ಜಾಲತಾಣ

ಮೊಬೈಲ್ ನಲ್ಲಿ ದಿನವಿಡೀ ಗೇಮ್ ಆಡುತ್ತಿದ್ದ ಚೀನಾದ ಮಹಿಳೆ ಕಣ್ಣುಗಳನ್ನೇ ಕಳೆದುಕೊಂಡಿದ್ದಾಳೆ. ಭಾಗಶಃ ಕುರುಡಿಯಾಗಿದ್ದಾಳೆ. 20 ವರ್ಷದ ಯುವತಿ ಹಾನರ್ ಆಫ್ ಕಿಂಗ್ಸ್ ಅನ್ನೋ ಗೇಮ್ ಹುಚ್ಚಿಗೆ ಬಿದ್ದಿದ್ಲು. ದಿನವಿಡೀ ಸ್ಮಾರ್ಟ್ ಫೋನ್ ನಲ್ಲಿ ಗೇಮ್ ಆಡುತ್ತಿದ್ಲು.

ಕೆಲ ದಿನಗಳ ಬಳಿಕ ಅವಳ ಬಲಗಣ್ಣು ಸಂಪೂರ್ಣ ಕುರುಡಾಗಿತ್ತು. ಕಾಣಿಸುತ್ತಲೇ ಇರಲಿಲ್ಲ. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆಕೆಯನ್ನು ಪರಿಶೀಲಿಸಿದ ವೈದ್ಯರು ರೆಟಿನಲ್ ಆರ್ಟರಿ ಒಕ್ಲುಶನ್ ಎಂಬ ಸಮಸ್ಯೆಯಾಗಿರೋದಾಗಿ ತಿಳಿಸಿದ್ದಾರೆ. ಬಲಗಣ್ಣು ಶಾಶ್ವತವಾಗಿ ಕುರುಡಾಗುವ ಅಪಾಯ ಕೂಡ ಇದೆ ಅಂತಾ ಹೇಳಿದ್ದಾರೆ.


ಬೆಳಗ್ಗೆ 6 ಗಂಟೆಗೆ ಏಳ್ತಾ ಇದ್ದ ಈ ಯುವತಿ ತಿಂಡಿ ಮುಗಿಸಿ, ಸಂಜೆ 4ರವರೆಗೂ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ರು. ಪೋಷಕರ ಎಚ್ಚರಿಕೆಗೂ ಕ್ಯಾರೇ ಅಂದಿರಲಿಲ್ಲ. ಅಕ್ಟೋಬರ್ 1ರಂದು ಕೂಡ ಯುವತಿ ಗೇಮ್ ಆಡುತ್ತಿದ್ಲು. ಸಂಜೆ ಊಟವಾದ ಮೇಲೆ ಇದ್ದಕ್ಕಿದ್ದಂತೆ ಆಕೆಗೆ ಬಲಗಣ್ಣು ಸಂಪೂರ್ಣ ಕಾಣಿಸುತ್ತಲೇ ಇರಲಿಲ್ಲ.

ಸುಮಾರು 200 ಮಿಲಿಯನ್ ಜನರು ಈ ಹಾನರ್ ಆಫ್ ಕಿಂಗ್ಸ್ ಅನ್ನೋ ಗೇಮ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಈ ಗೇಮ್ ಅನ್ನು 12 ವರ್ಷದೊಳಗಿನ ಮಕ್ಕಳು ಆಡದಂತೆ ನಿರ್ಬಂಧ ಕೂಡ ವಿಧಿಸಲಾಗಿದೆ.

ಧನ್ಯವಾದಗಳು.

Written by

We are Creative Blogger Theme Wavers which provides user friendly, effective and easy to use themes. Each support has free and providing HD support screen casting.

0 comments:

Recent posts

# STETHOSCOPE ಪ್ಯಾರಿಸ್ನ ನೆಕರ್-ಎನ್ಫಾಂಟ್ಸ್ ಮ್ಯಾಲೇಡ್ಸ್ ಆಸ್ಪತ್ರೆಯಲ್ಲಿ 1816 ರಲ್ಲಿ ರೆನೆ ಲಾನೆಕ್ ಅವರು ಸ್ಟೆತೊಸ್ಕೋಪ್ ಅನ್ನು ಫ್ರಾನ್ಸ್ನಲ್ಲಿ ಕಂಡುಹಿಡಿದರ...

 

© 2013 ವಿಶೇಷವಾಣಿ. All rights resevered. Designed by Templateism | Blogger Templates

Back To Top